ನಮಗೆ ಬರುವ ಈ - ಮೇಲ್ ಗಳಲ್ಲಿ ಹಲವಾರು ಕಥೆಗಳಿರುತ್ತವೆ; ಕವಿತೆಗಳಿರುತ್ತವೆ; ಆಶ್ಚರ್ಯ ತರಿಸುವ ಸಂಗತಿಗಳು
ಇರುತ್ತವೆ. ಮೊನ್ನೆ ನಮ್ಮ ಹರೀಶಣ್ಣ ಕಳುಹಿಸಿದ ಮೇಲ್ನಲ್ಲಿ ಅಚ್ಚರಿಯ ಸಾಲುಗಳಿದ್ದವು. ಅದನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ. ಓದಿ ನೋಡಿ, ನಿಮಗೂ ಇಷ್ಟವಾಗಬಹುದು...
ಬ್ಯುಸಿನೆಸ್ ಲಾಜಿಕ್ಸ್ ಹೀಗಿರಬೇಕಂತೆ....
- ಅಪ್ಪ: ನಾನು ಆಯ್ಕೆ ಮಾಡಿರುವ ಹುಡುಗಿಯನ್ನೇ ನೀನು ಮದುವೆಯಾಗಬೇಕು.
- ಮಗ: ನನ್ನ ಪತ್ನಿಯಾಗುವವಳನ್ನು ನಾನೇ ಹುಡುಕಿಕೊಳ್ಳುತ್ತೇನೆ!.
- ಅಪ್ಪ: ಆದರೆ, ಆ ಹುಡುಗಿ ಬಿಲ್ ಗೇಟ್ಸ್ನ ಪುತ್ರಿ.
- ಮಗ: ಹೌದಾ... ವಿಷಯ ಹೀಗಿದ್ದರೆ ಓ...ಕೆ.
ನಂತರ ಅಪ್ಪ ಬಿಲ್ಗೇಟ್ಸ್ ಅವರಲ್ಲಿ ಪ್ರಸ್ತಾಪ ಇಡುತ್ತಾನೆ.
- ಅಪ್ಪ: ನಿಮ್ಮ ಮಗಳಿಗೆ ನನ್ನ ಬಳಿ ಗಂಡನಿದ್ದಾನೆ.
- ಬಿಲ್ಗೇಟ್ಸ್: ಆದರೆ, ನನ್ನ ಮಗಳಿಗಿನ್ನೂ ಮದುವೆಯ ವಯಸ್ಸಾಗಿಲ್ಲ!
- ಅಪ್ಪ: ಆದರೆ, ಈ ಯುವಕ ವಿಶ್ವಬ್ಯಾಂಕ್ನ ಉಪಾಧ್ಯಕ್ಷ.
- ಬಿಲ್ಗೇಟ್ಸ್: ಆಹಾ.. ವಿಷಯ ಹೀಗಿದ್ದರೆ ಓ...ಕೆ.
ಅಂತಿಮವಾಗಿ ಅಪ್ಪ ವಿಶ್ವಬ್ಯಾಂಕ್ನ ಅಧ್ಯಕ್ಷನನ್ನು ಕಾಣಲು ಹೋಗುತ್ತಾನೆ.
- ಅಪ್ಪ: ವಿಶ್ವಬ್ಯಾಂಕ್ ಉಪಾಧ್ಯಕ್ಷರಾಗಿ ಶಿಫಾರಸು ಮಾಡಲು ನನ್ನ ಬಳಿ ಒಬ್ಬ ಯುವಕನಿದ್ದಾನೆ.
- ಅಧ್ಯಕ್ಷ: ಆದರೆ, ನಮ್ಮಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಉಪಾಧ್ಯಕ್ಷರಿದ್ದಾರೆ.
- ಅಪ್ಪ: ಆದರೆ, ಈ ಯುವಕ ಬಿಲ್ಗೆತ್ಸ್ ಅಳಿಯ.
- ಅಧ್ಯಕ್ಷ: ಹೌದಾ... ವಿಷಯ ಹೀಗಿದ್ದರೆ ಓ..ಕೆ.!
ನೋಡಿ ಸ್ವಾಮಿ ವ್ಯವಹಾರ ಮಾಡುವುದು ಎಂದರೆ ಹೀಗೆ!.
ನೀತಿ: ನಿಮ್ಮಲ್ಲಿ ಏನೂ ಇಲ್ಲದಿದ್ದರೂ, ಏನಾದರೂ ನೀವು ಪಡೆದುಕೊಳ್ಳಬಹುದು. ಆದರೆ, ಪಾಸಿಟಿವ್ ಆಗಿರಬೇಕು.
-----------------------------
ಮಾರ್ಕೆಟಿಂಗ್ ಎಂದರೇನು?
ನೀವು ಪಾರ್ಟಿಯಲ್ಲಿ ಸುಂದರವಾದ ಯುವತಿಯನ್ನು ನೋಡುತ್ತೀರಿ ಎಂದುಕೊಳ್ಳಿ. ಆಕೆಯ ಬಳಿಗ ಹೋಗಿ ಕೇಳಿ, ನಾನು ತುಂಬಾ ಶ್ರೀಮಂತ. ನನ್ನನ್ನು ಮದುವೆಯಾಗ್ತೀಯಾ!? - ಅದು ಮರ್ಕೆಟಂಗ್.
ಅಂತೆಯೇ ನೀವು ಸ್ನೇಹಿತರೊಂದಿಗೆ ಇದ್ದಾಗ ಸುಂದರವಾದ ಹುಡುಗಿಯನ್ನು ಕಂಡರೆ, ನಿಮ್ಮಲ್ಲಿದ್ದ ಒಬ್ಬ ಸ್ನೇಹಿತ ಆಕೆಯ ಬಳಿ ಹೋಗಿ, ನನ್ನ ಸ್ನೇಹಿತ ತುಂಬಾ ಧನಿಕ. ಆತನನ್ನು ಮದುವಯಾಗುವಿರಾ ಎಂದು ಕೇಳಿದರೆ- ಅದು ಜಾಹಿರಾತು.
ಪಾರ್ಟಿಯಲ್ಲಿ ಕಂಡ ಯುವತಿಯಿಂದ ಫನ್ ನಂಬರ್ ಪಡದು, ದಿನ ಕಳೆದ ನಂತರ ಫೋನ್ನಲ್ಲಿ ಮಾತನಾಡಿ, ಮದುವೆಯಾಗುವೆಯಾ ಎಂದು ಕೇಳಿದರೆ ಅದು- ಟೆಲಿ ಮಾರ್ಕೆಟಿಂಗ್.
ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯ ಬಳಿ ಹೋಗಿ, ಪಾನೀಯ ಕುಡಿಸಿ, ಆಕೆ ಕೆಳಗೆ ಬೀಳಿಸಿದ ಬ್ಯಾಗ್ ಅನ್ನು ಎತ್ತಿಕಟ್ಟು ಕಾರ್ನಲ್ಲಿ ಕೂರಿಸಿಕಂಡು ಮನೆಗೆ ಕರೆದುಕೊಂಡು ಹೋಗುವಾಗ, ಮದುವೆಯಾಗವೆಯಾ ಎಂದು ಕೇಳಿದರೆ
- ಅದು ಸಾರ್ವಜನಿಕ ಸಂಪರ್ಕ.
ನೀವು ಪಾರ್ಟಿಯಲ್ಲಿ ಕಂಡ ಸುಂದರ ಯುವತಿ, ತಾನಾಗಿಯೇ ನಿಮ್ಮ ಬಳಿಗೆ ಬಂದು ನೀವು ತುಂಬಾ ಧನಿಕರಿದ್ದೀರಿ. ನಾನು ನಿಮ್ಮನ್ನು ಮದುವೆಯಾಗಲು ಇಚ್ಚಿಸುತ್ತೇನೆ ಎಂದು ಕೇಳಿದರೆ- ಅದು ಬ್ರಾಂಡ್ ರೆಕಗ್ನಿಷನ್.
ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯನ್ನು ಮದುವಯಾಗುವೆಯ ಎಂದು ನೀವು ನೇರ ನೇರ ಕೇಳುತ್ತೀರಿ. ಆಗ ಆಕೆ ನಿಮ್ಮ ಕೆನ್ನೆಗೆ ನಯವಾಗಿ ಏಟು ಕೊಟ್ಟರೆ- ಅದು ಗ್ರಾಹಕರ ಫೀಡ್ಬ್ಯಾಕ್!.